ಶ್ರೀ ಭುವನೇಂದ್ರ ಕಾಲೇಜು ನಮ್ಮ ಕಾರ್ಕಳದ ಹೆಮ್ಮೆಯ  ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿದೆ.ಕಾರ್ಕಳದ ಸುತ್ತಮುತ್ತಲಿನ ಊರಿನ ವಿವಿಧ ಕ್ಷೇತ್ರಗಳ ಸಾಧಕರಲ್ಲಿ ಬಹುತೇಕರು ನಮ್ಮ ಕಾಲೇಜಿನ ಹಳೆವಿದ್ಯಾರ್ಥಿಗಳೇ ಆಗಿರುತ್ತಾರೆ ಎಂಬುವುದು ಹೆಮ್ಮೆಯ ಸಂಗತಿ.

 

ವಿದ್ಯಾ ಏಕಾಂತತೆಗೆ ಪೂರಕವಾದ ಶಾಂತ ಪ್ರದೇಶದಲ್ಲಿ ಸ್ಥಿತವಾಗಿರುವ ನಮ್ಮ ಕಾಲೇಜಿನಲ್ಲಿ ಉತ್ತಮ ದರ್ಜೆಯ ತರಗತಿ ಕೊಠಡಿ,ಅಕ್ಷರದ ಅಕ್ಷಯ ಪಾತ್ರೆಯಂತಿರುವ ಗ್ರಂಥಾಲಯ,ದೃಶ್ಯ-ಶ್ರವ್ಯ ಕೊಠಡಿಗಳು, ವಿಶಾಲವಾದ ಒಳಸಭಾಂಗಣ,ಸುವಿಶಾಲ ಹೊರ ಸಭಾಂಗಣ ಹಾಗು ಸುಸಜ್ಜಿತ ಒಳಕ್ರೀಡಾಂಗಣವನ್ನು ಹೊಂದಿದೆ.ಜ್ಞಾನದ ಗಣಿಗಳಂತಿರುವ ಅನುಭವಿ ಉಪನ್ಯಾಸಕರು,ದಕ್ಷ ಹಾಗು ಸಮರ್ಥ ಪ್ರಾಂಶುಪಾಲರು ಹಾಗು ಸ್ಪಂದನಾತ್ಮಕ ಕಛೇರಿ ಸಿಬ್ಬಂದಿಗಳನ್ನು ಹೊಂದಿರುವ ನಮ್ಮ ಕಾಲೇಜು ಪಠ್ಯಗಳ ಜೊತೆಗೆ ಪಠ್ಯೇತರ ಚತುವಟಿಕೆಗಳಿಗೂ ವಿಶೇಷ ಪ್ರಾಶಸ್ತ್ಯ ನೀಡುತ್ತಾ ಬಂದಿದೆ.

 

NSS ಹಾಗು ಸಾಹಿತ್ಯ ಸಂಘಗಳ ಸದಸ್ಯನಾದ ನಾನು ಅವೆರಡರಿಂದ ಸಾಕಷ್ಟು ಜ್ಞಾನ,ಅನುಭವ ಹಾಗು ಕೀರ್ತಿಯನ್ನು ಗಳಿಸಿದ್ದೇನೆ.

ನನ್ನ ಸಾಮಾನ್ಯ ಪ್ರತಿಭೆಯನ್ನು ಅಸಾಮಾನ್ಯ ರೂಪದಲ್ಲಿ ಗುರುತಿಸಿದರಿಂದ ವಿಶ್ವವಿದ್ಯಾಲಯ ಮಟ್ಟಗಳಲ್ಲಿ ಹಾಗು ರಾಜ್ಯಮಟ್ಟದಲ್ಲಿ  ಗುರುತಿಸಲ್ಪಟ್ಟೆನು;ಅಲ್ಲದೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜಯಶಾಲಿಯೂ ಆದೆನು.

 

ಹೀಗೆ ಹಲವು ರೀತಿಯಲ್ಲಿ ನಮ್ಮ ಕಾಲೇಜು ಪ್ರತಿಭೆಗಳನ್ನು ಗುರುತಿಸುತ್ತಾ ಬಂದಿದೆ.

ಮೌಲ್ಯಾಧಾರಿತ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತಾ ಬಂದಿರುವ ನಮ್ಮಕಾಲೇಜಿನಲ್ಲಿ ಪ್ರತೀವರ್ಷ “ಮೋರಲ್ ಸ್ಪಿರಿಚುವಲ್ ಕ್ಯಾಂಪ್” ನಡೆಯುತ್ತದೆ.ಹೀಗೆ ಉತ್ಕೃಷ್ಟತೆಯ ಪರಕಾಷ್ಠೆಯ ಶಿಕ್ಷಣದ ಮೂಲಕ ಕಾಲೇಜಿನ ಕೀರ್ತಿ ಅಷ್ಟದಿಕ್ಕುಗಳಲ್ಲಿ ಹರಡಲಿ ಎಂದು ಹಾರೈಸುತ್ತೇನೆ.

Open chat
Powered by